9th ಜೂನ್ ನಂದನ್ ನ ಪ್ಲೇ ಸ್ಕೂಲ್ ನ ಮೊದಲ ದಿನ. ಆವತ್ತು ಅವನಿಗಿಂತ ಹೆಚ್ಚು ಆತಂಕ, ನಿರೀಕ್ಷೆ , ಕುತೂಹಲ, ಕೌತುಕ, ಉತ್ಸಾಹ ನನಗೇ ಇತ್ತು ಅನ್ಸುತ್ತೆ. ಅವನ ಸಾಮಾಜಿಕ ಬದುಕಿನ ಮೊದಲ ಮಜಲು, ಅವನ ಶೈಕ್ಷಣಿಕ ಪಯಣದ ಅತಿ ಪುಟ್ಟ ಮೊದಲ ಹೆಜ್ಜೆ.. ಆ ದಿನದ ಹೆಜ್ಜೆ-ಗುರುತು ಈ ಚಿಕ್ಕ-ಚೊಕ್ಕ ಬ್ಲಾಗ್ ಪೋಸ್ಟ್ ನಲ್ಲಿ :-)
ಶಾಲೇಗ್ ಹೊರಟ ನಂದನ್
ಜಾರುಬಂಡಿ ಆಟ, ಜಾರಿ ಬೀಳೋ ಆಟ!
ನನ್ ಕಾರ್ ನಾಗೆ ನಾನೊಬ್ನೇ ಜಾಣ
ಬಣ್ಣ-ಬಣ್ಣದ ಚೆಂಡುಗಳ ಮೇಲೆ ನಿಂತ್ರೆ ಹೆಂಗಿರತ್ತೆ ಗೊತ್ತಾ?!
ಶಾಲೆಯ ಒಳಗೆ
ನಮ್ ಶಾಲೆಯ ಹಕ್ಕಿ-ಹಾಡು
ಮನೇಗ್ ಬಂದಾಯ್ತು.. ಇನ್ನು ಮಜವಾಗಿ ಕಾರ್‍ಟೂನ್ ನೋಡಬಹುದು :-)
ನಮ್ ಪುಟ್ಟ ಚಿಟ್ಟೆಗಾಗ್ಲೇ ಎರಡು ವರ್ಷ :-) ಎರಡು ವರ್ಷದ ಹಿಂದಿನ ಈ ದಿನ (7th June) ನೆನಪಿಸಿಕೊಂಡ್ರೆ, ನನ್ನನ್ನ ಮೊದಲ ಬಾರಿಗೆ ಪಿಳಿ-ಪಿಳಿ ಎಂದು ನೋಡಿದ ಆ ಹೊಳಪು ಕಂಗಳೇ ನೆನಪಿಗೆ ಬರೋದು.. ಆವಾಗ ಒಳ್ಳೇ ವೆನಿಲಾ ಫ್ಲೇವರ್ ಥರ ಅನ್ಸಿದ್ದ ಆ ಪುಟ್ಟ ಕಂದ ಎರಡೇ ಎರಡು ವರ್ಷಗಳಲ್ಲೇ ಅದೆಷ್ಟು ಬಣ್ಣ-ಬಣ್ಣವಾಗಿ ಬೆಳೀತಿದಾನೆ! ಅದಕ್ಕೆ ಈ ಸಲ ಅವನ ಹುಟ್ಟು-ಹಬ್ಬಕ್ಕೆ "ಚಿಟ್ಟೆ" ನಾ ಥೀಮ್ ಆಗಿ ಆಯ್ಕೆ ಮಾಡಿದ್ದು. ಥ್ಯಾಂಕ್ಸ್ ಟು ’ಪುಟ್ಟಿಯ ಅಮ್ಮ’ , ನನಗೆ ಥೀಮ್ ಬಗ್ಗೆ ಆಲೋಚನೆ ಬಂದಿದ್ದೆ ಪುಟ್ಟಿಯ ಬ್ಲಾಗ್ ನೋಡಿ..
ಚಿಟ್ಟೆಯ ಸುತ್ತ ನಮ್ಮಯ ಚಿತ್ತ...
ಹುಟ್ಟು ಹಬ್ಬದ ಕೆಲವೇ ದಿನ ಮುಂಚೆ ನಂದನ್ ಚಿಟ್ಟೆ ಹಿಡೀತಿರೋದು ನಮ್ ಪುಟ್ ಚಿಟ್ಟೆ
ಚಿಟ್ಟೆ ಬುಕ್-ಮಾರ್ಕ್, ಬಣ್ಣ ತುಂಬಿಸಿಕೊಳ್ಳೋಕೆ ರೆಡಿ
ಗೆಳೆಯ- ಗೆಳತಿಯರು ತಮ್ಮ- ತಮ್ಮ ಚಿಟ್ಟೆ ಬುಕ್-ಮಾರ್ಕ್ ಗೆ ಬಣ್ಣ ತುಂಬ್ತಿರೋದು ಪುಟ್ಟ ಚಿಟ್ಟೆಗಳಿಗೆಲ್ಲ ಚಿಟ್ಟೆ Wrist-Band