Monday, December 13, 2010

ನಂದನ್ ನ ನಗೆ-ಹನಿಗಳು

ಕೆಳಗಿನ ಘಟನೆಗಳು ಕಾಲ್ಪನಿಕವಲ್ಲ, ನಮ್ಮ ಮನೆಯಲ್ಲಿ ನಂದನ್ ಜೊತೆ ನಡೆದ ತಮಾಷೆಯ ರಸ-ನಿಮಿಷಗಳು ;-)

೧.
ಮನೆಯಲ್ಲಿ ಸರಸ್ವತಿಯ ತೈಲ ಚಿತ್ರವೊಂದನ್ನು ಹೊಸದಾಗಿ ತಂದಿದ್ದೆವು. ಮೊದಲ ಬಾರಿಗೆ ನಂದನ್ ಗೆ ಸರಸ್ವತಿಯ ಸರಸ್ವತಿಗೆ ನಂದನ್ ನ ಪರಿಚಯ. ಆಮೇಲೆ...

ಅಮ್ಮ - ಪುಟ್ಟ, ಸರಸ್ವತಿ ಕೈಯಲ್ಲಿ ಏನು ಹಿಡ್ಕೊಂಡಿದಾಳೆ?
ನಂದನ್ - ಗಿಟಾರ್....!

ಅಮ್ಮ - ಸರಸ್ವತಿ ಹಿಂದೆ ನೀರು ಹರೀತಿದೆಯಲ್ಲ ಏನದು?
ನಂದನ್ - ಸ್ವಿಮಿಂಗ್-ಪೂಲ್!

೨.
ಅಡಿಗೆ ಮನೆಯಲ್ಲಿ ಅಮ್ಮ ಕೆಲಸದಲ್ಲಿ ನಿರತ. ನಂದನ್ ಗೆ ಈಗ ಅಡಿಗೆ ಮನೆಯಲ್ಲಿ ಅತಿಯಾದ ಕೆಲಸ!

ಅಮ್ಮ - ಸ್ವಲ್ಪ ಕೋಪದಿಂದ, ನಂದನ್ ಹೊರಗೆ ಹೋಗು
ನಂದನ್ - ಹೋಗಲ್ಲ
ಅಮ್ಮನ ಇಂಗ್ಲೀಷ್ ಅನುವಾದ - ನಂದನ್ ಗೋ...
ನಂದನ್ ನ ಇಂಗ್ಲೀಷ್ ಅನುವಾದ - ಗೋಗಲ್ಲ!

1 comment:

Roopa said...

ಹಹ್ಹ ಮಕ್ಕಳ ಮಾತು :))