Friday, August 28, 2009

ಇಷ್ಟು ದಿನ..

ನಂದನ್ ಬಗ್ಗೆ, ನಂದನ್ ಬೆಳವಣಿಗೆ ಬಗ್ಗೆ, ಅವನ ತುಂಟಾಟದ ಬಗ್ಗೆ ಬರೆಯೋಣ ಅಂತ ಬ್ಲಾಗ್ ಶುರು ಮಾಡಿದೆ.ಉದ್ದೇಶ ಚೆನ್ನಾಗಿತ್ತು, ಆದರೆ ಅದ್ಯಾಕೋ ಬರೆಯೋಕೆ ಆಗ್ಲೇ ಇಲ್ಲ..

ಈಗ ಅವನ ತುಂಟಾಟ ನೋಡಿ ಬರೀಲೇ ಬೇಕು ಅನ್ನೋ ಸ್ಫೂರ್ತಿ ಮತ್ತೆ ಬಂದಿದೆ.. ನೆನಪುಗಳು ಇರತ್ತೆ ಆದ್ರೆ ಅವು ಮಾಸತ್ತೆ.. ನೆನಪುಗಳನ್ನ ಹಂಚಲು, ಅವನ್ನ ಮತ್ತೊಮ್ಮೆ-ಮಗದೊಮ್ಮೆ ಆಸ್ವಾದಿಸಲು ಮತ್ತೊಮ್ಮೆ ಬರೀತಿದಿನಿ..ಕ್ಷಮೆ ಇರಲಿ.. ಕಳೆದ ದಿನಗಳಿಗಾಗಿ.. :-)

ಕಲ್ಪನೆಗಳ ಅಂಗಳದಲ್ಲೇ ಬರೆದು ಅಭ್ಯಾಸ ಜಾಸ್ತಿ ನನಗೆ.. ಹೀಗಾಗಿ ನಂದನ್ ಬಗ್ಗೆ ಬರೆಯೋದು ಒಂಥರ ದಿನಚರಿ ಬರೆದಂತಿರತ್ತೇನೋ ಅನಿಸ್ತಿತ್ತು.. ಸೋಮಾರಿ ಮನಸಿಗೆ ನೂರೆಂಟು ಸಬೂಬು.. ;-) ನಂದನ್ ಗೆದ್ದ, ನಾನು ಸೋತೆ.. :-) ಅವನ ತುಂಟಾಟ ವರ್ಣನೆ ಮಾಡ್ಲೇ ಬೇಕು ಅನಿಸ್ತಿದೆ.. ಕೆಲವೊಮ್ಮೆ ಪದಗಳೇ ಬೇಡ.. ನೀವೇ ನೋಡಿ ಆನಂದಿಸಿ.. :-)

ಮತ್ತೊಮ್ಮೆ ಬರೆಯುವೆ ಇನ್ನಷ್ಟು ಹೊಸತನದೊಂದಿಗೆ :-)

No comments: